ಆಪರೇಷನ್ ಡೈಮಂಡ್ ರಾಕೆಟ್ (೧೯೭೮)......ನೀ ನಡುಗುವೆಯೇಕೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಡಾ.ರಾಜ ಮತ್ತು ಎಸ್.ಜಾನಕಿ

ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು

ಈ ಸಂಜೆ ಮತ್ತೆ ಬರದು ಏಕಾಂತ ಹೀಗೇ ಸಿಗದು
ಈ ಸಂಜೆ ಮತ್ತೆ ಬರದು ಏಕಾಂತ ಹೀಗೇ ಸಿಗದು
ನೋಡು ಯಾರೂ ಇಲ್ಲ ನಿನ್ನ ಬಲ್ಲೆನಲ್ಲ
ಹೇಳು ನಿನ್ನಾಸೆ ಎಲ್ಲ
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು

ಇನ್ನೇಕೆ ದೂರ ನಿಲುವೇ ಯಾರಿಲ್ಲ ನೋಡು ಚೆಲುವೆ
ಇನ್ನೇಕೆ ದೂರ ನಿಲುವೇ ಯಾರಿಲ್ಲ ನೋಡು ಚೆಲುವೆ
ಹಾವು ಕಂಡ ಹಾಗೆ ಏಕೆ ಹೀಗೇ ನಿಂತೆ
ಹೇಳು ಇನ್ನೇಕೆ ಚಿಂತೆ
ನೀ ನಡುಗುವೆಯೇಕೆ ಬಾ ಭಯವನು ಬಿಡು
ಏಕೆ ಹೆದರುವೆ ಹೀಗೆ ನಾನಿರಲು ನಾನಿರಲು

Category: ಕನ್ನಡ ಚಿತ್ರಸಾಹಿತ್ಯ
Category: ಆಪರೇಷನ್ ಡೈಮಂಡ್ ರಾಕೆಟ್ ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
ವರ್ಗ: ಡಾ.ರಾಜ್‌ಕುಮಾರ್ ಗಾಯನ
ವರ್ಗ: ಎಸ್.ಜಾನಕಿ ಗಾಯನವರ್ಗ:ಡಾ.ರಾಜ್‍ಕುಮಾರ್ ಗಾಯನ